ಕಾಲಕಲಿ

 ಒಬ್ಬ ಅಸುರ. ವಿರೋಚನನ ಮಗ, ಬಲಿಚಕ್ರವರ್ತಿಯ ಅಣ್ಣ. ದೇವತೆಗಳಿಗೆ ಹೆದರಿದ ಈತ ನಂದಗೋಕುಲದಲ್ಲಿ ಬೇಲದ ಮರದ ರೂಪದಲ್ಲಿ ವೇಷಾಂತರಗೊಂಡಿದ್ದ. ಆ ಮರದ ಹಣ್ಣುಗಳು ಬಹಳ ದುರ್ಗಂಧಯುಕ್ತವಾಗಿ ನಾರುತ್ತಿದ್ದುವು. ಅವನ್ನು ತಿಂದ ಗೋಕುಲದವರು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದು ಪರಿಹಾರ ಕಾಣದೆ ಪರಿತಪಿಸುತ್ತಿದ್ದರು. ಈ ರಹಸ್ಯವನ್ನರಿತ ಬಲರಾಮ ಮತ್ತು ಶ್ರೀಕೃಷ್ಣರು ಆ ಮರವನ್ನು ಕಡಿದು ಹಾಕಿ ತನ್ಮೂಲಕ ಆ ರಾಕ್ಷಸನನ್ನು ಕೊಂದರು.    

(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ